Uncategorized

ಕಟ್ಟೆಮಾಡು ಶ್ರೀ ಮಾದೇವ (ಮಹಾ ಮೃತ್ಯುಂಜಯ ಮಾದೇಶ್ವರ) ದೇವಸ್ಥಾನ- ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರವೇಶಕ್ಕೆ ಅನಗತ್ಯ ಅಡಚಣೆಯ ಬಗ್ಗೆ ಜಿಲ್ಲಾಡಳಿತಕ್ಕೆ ವಿಚಾರ ಮಂಡನೆ.

ಕಟ್ಟೆಮಾಡು ಶ್ರೀ ಮಾದೇವ (ಮಹಾ ಮೃತ್ಯುಂಜಯ ಮಾದೇಶ್ವರ) ದೇವಸ್ಥಾನ- ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರವೇಶಕ್ಕೆ ಅನಗತ್ಯ ಅಡಚಣೆಯ ಬಗ್ಗೆ ಜಿಲ್ಲಾಡಳಿತಕ್ಕೆ ವಿಚಾರ ಮಂಡನೆ.

ಅಖಿಲ ಕೊಡವ ಸಮಾಜ ಪತ್ರಿಕಾ ಗೋಷ್ಠಿ

ಪ್ರೆಸ್ ಕ್ಲಬ್ ಮಡಿಕೇರಿ
ದಿನಾಂಕ: 04-01-2025

ವಿಷಯ: ಕಟ್ಟೆಮಾಡು ಶ್ರೀ ಮಾದೇವ (ಮಹಾ ಮೃತ್ಯುಂಜಯ ಮಾದೇಶ್ವರ) ದೇವಸ್ಥಾನ- ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರವೇಶಕ್ಕೆ ಅನಗತ್ಯ ಅಡಚಣೆಯ ಬಗ್ಗೆ ಜಿಲ್ಲಾಡಳಿತಕ್ಕೆ ವಿಚಾರ ಮಂಡನೆ.

ದಿ. 27-12-2024 ರ ಸಂಜೆ ಕಟ್ಟೆಮಾಡು ಪಾಪಳಕೇರಿ ಶ್ರೀ ಮಹಾ ಮೃತ್ಯುಂಜಯ ಮಾದೇಶ್ವರ ವೆಂದು ಹೊಸದಾಗಿ ನಾಮಕರಣ ಮಾಡಿದ ದೇವಸ್ಥಾನದಲ್ಲಿ ನಡೆದ ಗಲಭೆ ಮತ್ತು ಹಲ್ಲೆ ಪ್ರಕರಣ ಶಾಂತಿ ಪ್ರಿಯ ಕೊಡಗಿನವರ ಮನಸ್ಸನ್ನು ಕಲಕಿ ಜನಾಂಗಗಳ ಮದ್ಯೆ ಕಂದಕ ಏರ್ಪಟ್ಟಿರುವುದು ವಾಸ್ತವಾಂಶ. ಅಂದು ರಾತ್ರಿ ನಾವುಗಳು ದೇವಸ್ಥಾನಕ್ಕೆ ಹೋಗಿ ಹಲ್ಲೆ ಗೆ ಒಳಗಾದ ನಮ್ಮ ಜಂಟಿ ಕಾರ್ಯದರ್ಶಿ ಶ್ರೀ ನಂದೇಟಿರ ರಾಜ ಮಾದಪ್ಪ ನವರನ್ನು ಆಸ್ಪತ್ರೆ ಗೆ ಸಾಗಿಸುವ ಮತ್ತು ಮಹಿಳೆಯರ ಮೇಲೆ ಹಲ್ಲೆ ಮಾಡಿದ ರೌಡಿ ಗಳ ಓಡಾಟದಲ್ಲಿ ಭಯ ಭೀತರಾಗಿದ್ದ ಸಾಂಪ್ರದಾಯಿಕ ಉಡುಪು ಧರಿಸಿದ್ದ ಮಹಿಳೆಯರಿಗೆ ಪೊಲೀಸ್ ರಿಂದ ರಕ್ಷಣೆ ಏರ್ಪಡಿಸುವ ಕಾರ್ಯದಲ್ಲಿ ಮಗ್ನರಾಗಿದ್ದೆವು. ಆ ಸಮಯದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯವರು ನಡೆಸುತ್ತಿರುವ ವಿದ್ಯಮಾನಗಳನ್ನು ಸೂಕ್ಷ್ಮ ವಾಗಿ ಗಮನಿಸಿದಾಗ ಕಂಡು ಬಂದ ಅಂಶಗಳನ್ನು ಸಾರ್ವಜನಿಕರ ಭಕ್ತರ ಮುಂದಿಡುತ್ತಿದ್ದೇವೆ.

ಕಟ್ಟೆಮಾಡು ಪಾಪಳಕೇರಿ ಮಾದೇವ ದೇವರ ಸ್ಥಾನ ಸುಮಾರು ಸಾವಿರ ವರ್ಷಗಳ ಇತಿಹಾಸ ವಿದ್ದು ಅದು ಕೊಡಗಿನಲ್ಲಿ ಪಾಲೇರಿ ರಾಜವಂಶ ಸ್ಥಾಪನೆಯಾಗುವ ಮೊದಲೇ ಇದ್ದ ಸ್ಥಾನ ಮತ್ತು ಮತ್ತು ಆ ಸ್ಥಾನಕ್ಕೆ ಹೊಂದಿಕೊಂಡಂತೆ ಸುಮಾರು ಮೂರು ಎಕರೆ ಜಾಗವು ದೇವರ ಹೆಸರಿನಲ್ಲಿ ಇದ್ದದು ಅಲ್ಲದೆ ಅದು ಪಾಪಳ ಕೇರಿಯ ತಕ್ಕ ಮುಖ್ಯಸ್ಥರಾದ ಪರಿಯಪ್ಪಮ್ಮನ ಅಮ್ಮಕೊಡವ ಜನಾಂಗದವರ ಸುಪರ್ದಿಯಲ್ಲಿ ಇದ್ದದ್ದು ವಾಸ್ತವಾಂಶ. ಪಾಪಳಕೇರಿಯು ಕಟ್ಟೆಮಾಡು ಗ್ರಾಮದ ಒಂದು ಕೇರಿಯಾಗಿದ್ದು ನಂದೇಟಿರ ಕುಟುಂಬ ಉರಿನ ತಕ್ಕ ಮುಖ್ಯಸ್ಥರು. ಆದಾಗಿಯೂ, ಈ ಜೀರ್ಣೋಧಾರ ಗೊಂಡ ದೇವಸ್ಥಾನಕ್ಕೆ ಪಾರಂಪರಿಕ ಪರಿಯಪ್ಪಮ್ಮನ/ ನಂದೇಟಿರ ಕುಟುಂಬ ದವರನ್ನು ತಕ್ಕ ಮುಖ್ಯಸ್ಥರನ್ನಾಗಿ ಮುಂದುವರಿಸದಿರುವುದು ಸಂಶಯಕ್ಕೆ ಎಡೆ ಮಾಡಿದೆ.

ಸಾವಿರಾರು ವರ್ಷಗಳ ಪ್ರಾಚೀನತೆ ಯ ಕೊಡವ ಮತ್ತು ಕೊಡವ ಭಾಷಿಕ ಜನಾಂಗದವರ ಪಾರಂಪರಿಕ ಉಡುಪು/ ಆಭರಣ: ಕುಪ್ಯ ಚೇಲೆ, ಪೀಚೆ ಕತ್ತಿ, ಕೊಡವತಿ ಪೊಡಿಯ, ಕೊಕ್ಕೆತಾತಿ, ಪತ್ತಾಕ್, ಕಟ್ಟಿ ಬಳೆ, ತೊಡಂಗ್. ಗೆಜ್ಜೆ ತಂಡ್ ಪವಿತ್ರ. ಈ ದೇವಸ್ಥಾನ ನಡೆದು ಬಂದದ್ದು ಕೊಡವ ಮತ್ತು ಕೊಡವ ಭಾಷಿಕ ಜನಾಂಗದವರ ಸೇವೆ ಮತ್ತು ಆಚರಣೆ/ನಡಪು ಗೆ ಅನುಗುಣವಾಗಿ. ದೇವಸ್ಥಾನ ಆಕ್ರಮಣ ಕ್ಕೆ ತುತ್ತಾಗಿ ಉತ್ಸವ ಗಳು ನಿಂತು ಹೋದದ್ದು ಚರಿತ್ರೆ. ಇಲ್ಲಿ ಉತ್ಸವಗಳು ನಿಂತರೂ ದೇವರ ಸ್ಥಾನ ದಲ್ಲಿದ್ದ ಕಲ್ಲಿನ ವಿಗ್ರಹ ಗಳಿಗೆ ಕೆಲವು ಕೊಡವ ಭಾಷಿಕ ಕುಟುಂಬಗಳು ವರ್ಷಾವಧಿ ಪೂಜೆ ನಡೆಸುತ್ತಾ ಬಂದಿರುವುದು ವಾಸ್ತವಾಂಶ. ವರ್ಷಂಪ್ರತಿ ನಡೆದುಬಂದ ಸಂಪ್ರದಾಯದಂತೆ 2024 ರ ಪುತ್ತರಿ ಹಬ್ಬವನ್ನು ತೋರೇರ ಕುಟುಂಬ ದವರು ಇದೇ ದೇವಸ್ಥಾನದಲ್ಲಿ ಸಂಪ್ರದಾಯದಂತೆ ಉಡುಪು ಧರಿಸಿ ನಡೆಸಿರುತ್ತಾರೆ.

ಯಾವದೇ ದೇವರ ಸ್ಥಾನದ ಜಿರ್ಣೋಧಾರ ಮಾಡುವ ಸಮಯದಲ್ಲಿ ದೇವರ ಸ್ಥಾನದ ಇತಿಹಾಸ ತಿಳಿಯಲು ಶಾಸ್ತ್ರ ಪ್ರಕಾರ ಸ್ವರ್ಣ-ಪ್ರಶ್ನೆ ಕೇಳುವ ಸಂಧರ್ಭದಲ್ಲಿ ಬರುವ ಉತ್ತರವು ಮುಂದಕ್ಕೆ ಆ ಸ್ಥಾನದ ಅಭಿವೃಧಿಗೆ ಮಾಡಬೇಕಾದ ಕೆಲಸಗಳ ಬಗ್ಗೆ ಹೊರತು ದೇವರ ಹೆಸರನ್ನೇ ಬದಲಿಸುವ ಅಥವಾ ಆರಾಧ್ಯ ಮೂರ್ತಿಯನ್ನೇ ಬದಲು ಮಾಡುವ ಉತ್ತರಗಳು ಬರುವುದಿಲ್ಲ. ಆದರೆ ಇಲ್ಲಿ ಬಂದದ್ದು ಮೂಲ ಆರಾಧ್ಯ ಮೂರ್ತಿಯ ಹೆಸರನ್ನೇ ಬದಲು ಮಾಡುವ ತಂತ್ರದ ಉತ್ತರ ಸಂಶಯಕ್ಕೆ ಎಡೆಮಾಡಿದೆ. ಅರ್ಚಕ ವಿಗ್ನೇಶ್ವರ್ ಬಟ್ಟ್ ರ ಪಾತ್ರ ಕೂಡಾ ಸಂಶಯಕ್ಕೆ ಎಡೆ ಮಾಡಿ ಕೊಟ್ಟಿರುವುದು ಜನಾಭಿಪ್ರಾಯ. ಬಾಡಗರಕೇರಿ ಮೃತ್ಯುಂಜಯ ದೇವಸ್ಥಾನಕ್ಕೆ ಪರ್ಯಾಯವಾಗಿ ಮಹಾ ಮೃತ್ಯುಂಜಯ ಎಂದು ಹೆಸರಿಟ್ಟುಕೊಂಡು ಬಾಡಗರಕೇರಿಯ ದೇವಸ್ಥಾನದ ಖ್ಯಾತಿಯನ್ನು ಕುಂದಿಸಿ ಹೊಸ ಇತಿಹಾಸ ಸೃಸ್ಟಿಸುವ ಹುನ್ನಾರ ನಡೆಸಿರುವುದು ಮೇಲ್ನೋಟಕ್ಕೆ ಕಂಡು ಬರುತಿದೆ.

ಆದರೆ, ಕೆಲವು ಪ್ರಭಾವಿ ಜಾತಿವಾದಿಗಳು ಮತ್ತು ಹಾಲಿ ಅರ್ಚಕ ರು ಜೊತೆಯಾಗಿ, ಬೇರೆಲ್ಲೋ ಕಡೆಯಿಂದ ಬಂದ ತಂತ್ರಿ/ ಸ್ವಾಮೀಜಿಗಳ ಜೊತೆ ಸೇರಿ ಇಲ್ಲಿನ ಮುಗ್ದ ಜನರ ದಿಕ್ಕು ತಪ್ಪಿಸಿ ಮಾದೇವ ದೇವರ ಸ್ಥಾನದ ಹೆಸರನ್ನು ಮಹಾ ಮೃತ್ಯುಂಜಯ ವೆಂದು ಮರುನಾಮಕರಣ ಮಾಡಿಕೊಂಡು ತಮಗಿಷ್ಟ ಬಂದ ಹೊರನಾಡಿನ ಸಂಪ್ರದಾಯವನ್ನು ಕುತಂತ್ರದಿಂದ ಸ್ಥಳೀಯ ಮೂಲನಿವಾಸಿಗಳ ಮೇಲೆ ಹೇರಲು ದೇವಸ್ಥಾನದ ಆಡಳಿತ ದ ಚುಕ್ಕಾಣಿ ಹಿಡಿದಿರುವುದು ಸ್ಪಷ್ಟ. ಇದು ಅಸಾಂವಿಧಾನಿಕ.

ಅದಲ್ಲದೆ, ಆಡಳಿತ ಮಂಡಳಿ ಕೊಡಗಿನಾದ್ಯಂತ ಸಾರ್ವಜನಿಕರಿಂದ, ಕೊಡವ ಮತ್ತು ಕೊಡವ ಭಾಷಿಕರಿಂದ ದೇಣಿಗೆ ಸಂಗ್ರಹಿಸಿ ದೇವಸ್ಥಾನವನ್ನು ಕಟ್ಟಿರುವುದು ವಾಸ್ತವಾಂಶ. ಈ ದೇವಸ್ಥಾನಕ್ಕೆ ಹೋಗಲು ದಾರಿಯನ್ನು ಮಾಡಲು ಜಾಗವನ್ನು ಚಾಕಚಕ್ಯೆತೆಯಿಂದ ನಂದೇಟಿರ, ಪಳoಗಂಡ, ಅವರೆಮಾದಂಡ ಕುಟುಂಬದವರಿಂದ ಪಡೆದು ಕೊಂಡು ಪೂರ್ವ ನಿಯೋಜಿತವಾಗಿ ಜಾಗ ನೀಡಿದವರನ್ನೇ ದೇವಸ್ಥಾನದಕ್ಕೆ ಪ್ರವೇಶ ನಿರಾಕರಿಸುವ ತಂತ್ರ ಬೈಲಾದ ಮೂಲಕ ಮಾಡಿಕೊಂಡು ಕೊಡವ ಮತ್ತು ಕೊಡವ ಭಾಷಿಕ ಜನಾಂಗ ದವರನ್ನು ಹೊರಗಿಡುವ ಕ್ರತ್ಯ ನಡೆಸುತ್ತಿರುವುದು ಸ್ಪಷ್ಟ.

ಆದರೂ, ಕೊಡಗಿನ ಪ್ರಾಚೀನ ಸಂಪ್ರದಾಯದಂತೆ ಈ ಮಾದೇವ ದೇವರ ಈ ಸ್ಥಾನವನ್ನು ಮುನ್ನಡೆಸುವುದನ್ನು ಬಿಟ್ಟು, ಆಡಳಿತ ಮಂಡಳಿಯವರು ನಡೆಸಲು ಹೊರಟಿರುವುದು ಸಂಚಿನಿಂದ ಮೂಲ ದೇವರ ಹೆಸರನ್ನು ಬದಿಗಿಟ್ಟು ದೇವಸ್ಥಾನಕ್ಕೆ ದೇಣಿಗೆ ನೀಡಿದವರನ್ನು ಗಣನೆಗೆ ತೆಗೆದುಕೊಳ್ಳದೆ, ದೇವಸ್ಥಾನಕ್ಕೆ ಸ್ಥಳ ಮತ್ತು ದಾರಿ ನೀಡಿದವರನ್ನು ಹಲ್ಲೆ ಮಾಡಿ ಹೊರಗಿಟ್ಟು, ತಕ್ಕಾಮೆ ಪದ್ದತಿಯನ್ನು ಇಲ್ಲದಂತೆ ಮಾಡಿ, ಮನಬಂದ ಆಚರಣೆ ಯನ್ನು ಬೈಲಾ/ ಸಮಾನತೆ ಎಂಬ ಪರದೆ ಕಟ್ಟಿಕೊಂಡು ಅದರ ಹಿಂದೆ ಜನಾಂಗಗಳ ಮದ್ಯ ಕಂದಕ ನಿರ್ಮಿಸುತ್ತಾ, ಹಿಂಸಾಚಾರಕ್ಕೆ ಅಡಿಗಲ್ಲು ಹಾಕಿದ ಹಾಲಿ ಆಡಳಿತ ಮಂಡಳಿಯನ್ನು ಅಖಿಲ ಕೊಡವ ಸಮಾಜ ಖಂಡಿಸುತ್ತದೆ.

ಹೊರನಾಡಿನಿಂದ ಬಂದ ಜನಾಂಗಗಳು ತಮ್ಮ ಸಂಪ್ರದಾಯವನ್ನು ಆಚರಿಸಲು ತಾವೇ ಜಾಗ ಪಡೆದು/ಖರೀದಿಸಿ ತಮ್ಮ ಸಂಪ್ರದಾಯಕ್ಕೆ ತಕ್ಕಂತೆ ದೇವಸ್ಥಾನ ಕಟ್ಟಿಸಿ ಅಲ್ಲಿ ತಮ್ಮ ಆಚರಣೆಯನ್ನು ನಡೆಸಲು ಸ್ವಾತಂತ್ರವಿರುವುದು. ಆದರೆ, ಪಾಪಳಕೇರಿಯ ವ್ಯಾಪ್ತಿಯಿಂದ ಹೊರಗಿರುವವರು ತಮ್ಮದೇ ಬಲಿಷ್ಠ ಗುಂಪು ರಚಿಸಿಕೊಡು ಬಂದು ಆಡಳಿತ ಮಂಡಳಿಯನ್ನು ರಚಿಸಿಕೊಂಡು ದೇವರ ಸ್ಥಾನವನ್ನು ಚಾಕ ಚಕ್ಯತೆ/ ಬೆದರಿಕೆ ತಂತ್ರ ದಿಂದ ಹೈಜಾಕ್ ಮಾಡಿ ಆಕ್ರಮಿಸಿ ಕೊಂಡು ಸಂಶಯ/ಕಪಟದ ಛಾಯೆಯಡಿ ದೇವಸ್ಥಾನ ನಡೆಸುವುದಕ್ಕೆ ಮಾದೇವರ ಕ್ರಪಾ ಕಟಾಕ್ಷವೂ ಜನ ಮನ್ನಣೆಯೂ ದೊರೆಯವುದು ಅಸಂಭವ.

ಮೊದಲ ಉತ್ಸವವನ್ನೇ ಶಾಂತಿ-ಸೌಹಾರ್ದತೆ ಯಿಂದ ನಡೆಸಲು ಮುಂದಾಗದೆ, ವಿವಿಧತೆಯಲ್ಲಿ ಏಕತೆ ಎಂಬ ರಾಷ್ಟ್ರ ನೀತಿಗೆ ವಿರುದ್ಧ ವಾಗಿ ನಡೆಯುತ್ತಾ, ಮಹಾ ಘರ್ಷಣೆಗೆ ಅಡಿಪಾಯ ಹಾಕಿ, ಮಹಿಳೆಯರನ್ನು ಮತ್ತು ಮಕ್ಕಳನ್ನು ಭಯ ಬೀತ ರನ್ನಾಗಿಸಿ, ಹಿಂಸಾಚಾರಕ್ಕೆ ಮುನ್ನುಡಿ ಬರೆದ ಜಾತಿವಾದಿ ಆಡಳಿತ ಮಂಡಳಿಯನ್ನು ಈ ಕೂಡಲೇ ಉಚ್ಛಾಟಿಸಿ, ಸರಕಾರ ಈ ದೇವಸ್ಥಾನವನ್ನು ವಹಿಸಿಕೊಂಡು, ಮಾದೇವ ದೇವರ ಹೆಸರಿನಡಿ ಸ್ಥಳೀಯ ಸಂಪ್ರದಾಯಕ್ಕೆ ಬದ್ದವಾಗಿ ಆಡಳಿತ ನಡೆಸಲು ಸರಕಾರಕ್ಕೆ ಕೊಡವ ಜನಾಂಗದ ಮಾತೃ ಸಂಸ್ಥೆ ಯಾದ ಅಖಿಲ ಕೊಡವ ಸಮಾಜ ಸಂಪೂರ್ಣ ಬೆಂಬಲ ನೀಡುವುದು.

ಪ್ರಾಚೀನ ಅಮೂಲ್ಯ ಪಾರಂಪರ್ಯದ ಹಿನ್ನಲೆ ಉಳ್ಳ ಮಾದೇವ ದೇವಸ್ಥಾನವು ಆಡಳಿತ ಮಂಡಳಿ ನಡೆಸುತ್ತಿರುವ ಕಪಟ ರಾಜಕೀಯ ಮೇಲಾಟದಲ್ಲಿ ಬೇರೊಂದು ದಿಕ್ಕಿನೆಡೆಗೆ ಸಾಗದಿರಲೆಂದು ಅಖಿಲ ಕೊಡವ ಸಮಾಜ ಆಶಿಸುತ್ತದೆ.

ನಮಗೆ ಘಟನೆ ನಡೆದ ರಾತ್ರಿ ಸ್ಥಳೀಯರು ಕೊಟ್ಟ ಮಾಹಿತಿ ಪ್ರಕಾರ, ಹಲ್ಲೆ ಮಾಡಲು ಪ್ರಚೋದಿಸಿದ ಕಾಂಗಿ ಮನೆ ಸತೀಶ, ಹಲ್ಲೆ ಮಾಡಿದ ವರೆನ್ನಲಾದ ಬಿದ್ರುಪೆನೆ ಮನೆ ಪ್ರಸನ್ನ, ಅಯ್ಯಪ್ಪ, ದ್ರುವ, ಜಿನ್ನು, ಮನು, ಚಿದು ಮತ್ತು ಅವರ ಸಹಚರರನ್ನು ಪೊಲೀಸ್ ವಿಚಾರಣೆ ಗೆ ಒಳಪಡಿಸಿ FIR ದಾಖಲು ಮಾಡುತ್ತಾರೆಂಬ ಭರವಸೆ ನಮಗಿದೆ. ದೇವರು ಬರುವವರೇ ಹಲ್ಲೆ ಮಾಡಿದರೆಂದು ಆರೋಪವಿದೆ.
ನಾಲ್ಕೈದು ಕೋಟಿ ರೂಪಾಯಿಗಳಸ್ಟು ದೇಣಿಗೆ ಸಂಗ್ರಹದ ಹಣ ಪೂರ್ತಿಯಾಗಿ ಲೆಕ್ಕಕ್ಕೆ ಬಂದಿಲ್ಲವೆಂದು ಸ್ಥಳೀಯರ ಆರೋಪವಿರುವುದರಿಂದ ತನಿಖೆ ಆಗಬೇಕಾಗಿದೆ 

ಅಧ್ಯಕ್ಷರು ಮತ್ತು ಕಾರ್ಯಕಾರಿ ಮಂಡಳಿ
ಅಖಿಲ ಕೊಡವ ಸಮಾಜ- ವಿರಾಜಪೇಟೆ

Latest Articles