ಕೊಡವ ಮತ್ತು ಭಾಷಿಕ ಸಮುದಾಯಗಳ ಸಂಸೃತಿಯ ಭದ್ರತೆಗಾಗಿ ಮತ್ತು ಸಂವಿಧಾನಬದ್ದವಾಗಿ ಹಕ್ಕು ಮತ್ತು ಸೌಲಭ್ಯಗಳ ಭೇಡಿಕೆಯನ್ನು ಮುಂದಿಟ್ಟು ಕುಟ್ಟದಿಂದ ಮಡಿಕೇರಿಗೆ ನಡೆಯುವ ಪಾದಯಾತ್ರೆಯ ಕುರಿತು…



ಅಖಿಲ ಕೊಡವ ಸಮಾಜದ ಪತ್ರಿಕಾ ಘೋಷ್ಠಿ/ಪ್ರಕಟಣೆ
ಸ್ಥಳ: ಪ್ರೆಸ್ ಕ್ಲಬ್ ಮಡಿಕೇರಿ
ದಿನಾಂಕ: 30-01-2025
ಗೆ,
ಮಾನ್ಯ ಸಂಪಾದಕರು/ ವರದಿಗಾರರು,
ರಾಷ್ಟ್ರ/ರಾಜ್ಯ/ ಜಿಲ್ಲಾ/ ಸ್ತಳೀಯಮಟ್ಟದ ಮುದ್ರಣ/ವಿದ್ಯುನ್ಮಾನ/ ಡಿಜಿಟಲ್ ಮಾದ್ಯಮಗಳು.
ಮಾನ್ಯರೆ,
ವಿಷಯ: ಕೊಡವ ಮತ್ತು ಭಾಷಿಕ ಸಮುದಾಯಗಳ ಸಂಸೃತಿಯ ಭದ್ರತೆಗಾಗಿ ಮತ್ತು ಸಂವಿಧಾನಬದ್ದವಾಗಿ ಹಕ್ಕು ಮತ್ತು ಸೌಲಭ್ಯಗಳ ಭೇಡಿಕೆಯನ್ನು ಮುಂದಿಟ್ಟು ಕುಟ್ಟದಿಂದ ಮಡಿಕೇರಿಗೆ ನಡೆಯುವ ಪಾದಯಾತ್ರೆಯ ಕುರಿತು…
ಕೊಡಗು ಒಂದಾನೊಂದು ಕಾಲದಲ್ಲಿ ವಿಶಾಲ ಕ್ರೋಢದೇಶವಾಗಿತ್ತು ಎಂಬುದನ್ನ ನಾವು, ಪುರಾಣಗಳಲ್ಲಿ ಜಾನಪದೀಯ ಇತಿಹಾಸದಲ್ಲಿ ಗಮನಿಸುತ್ತೇವೆ. ಆ ನಂತರದ ದಿನಗಳಲ್ಲಿ ದೇಶಹೋಗಿ ಒಂದು ಪ್ರಾದೇಶಿಕ ರಾಜ್ಯವಾಗಿ ಆಡಳಿತ ನಡೆಸುತಿತ್ತು. ಸ್ವತಂತ್ರ ನಂತರದ ಪ್ರಜಾಪ್ರಭುತ್ವ ವ್ಯವಸ್ತೆಯಲ್ಲಿಯೂ 1956 ರವರೆಗೂ ಕೂಡ ಪ್ರತ್ಯೇಕ “ಸಿ”. ರಾಜ್ಯದ ಸ್ಥಾನಮಾನ ಹೊಂದಿ, ತನ್ನದೇ ಆದ ಕಟ್ಟುಪಾಡು ಆಚರಣೆಯನ್ನು ಹೊಂದಿತ್ತು ನಂತರ ವಿಶಾಲ ಮೈಸೂರು ಸಂಸ್ಥಾನದೊಂದಿಗೆ ವಿಲೀನವಾಗಿ, ಆ ನಂತರ ಕರ್ನಾಟಕದೊಂದಿಗೆ ಸೇರಿಕೊಂಡು ಕೇವಲ ಒಂದು ಜಿಲ್ಲೆಯಾಗಿ ಮಾತ್ರ ಉಳಿದಿರುವುದು ಇಂದು ಇತಿಹಾಸ.
ಆದರೆಪುರಾಣಕಾಲದಿಂದಲೂ, ಆನಂತರದ ಕಾಲಮಾನದಲ್ಲೂ ಕೂಡ ಕೊಡವ ಮತ್ತು ಕೊಡವ ಭಾಷಿಕ ಸಮುದಾಯಗಳು ಕೊಡವ ಭಾಷೆ ಮತ್ತು ಸಂಸ್ಕೃತಿಯನ್ನು ಚಾಚೂತಪ್ಪದೆ ಪಾಲಿಸುತಿದ್ದು, ಇಂದಿಗೂ ಕೂಡ ಅದು ಮುಂದುವರೆದಿದೆ. ಅಂತೆಯೆ ನಾವು ಇತರ ಎಲ್ಲಾ ಭಾಷೆ ಮತ್ತು ಸಂಸ್ಕೃತಿಯನ್ನು ಕೂಡ ಗೌರವಿಸಿ ಕಾಲಕ್ಕೆ ತಕ್ಕಂತೆ ಅನುಸರಿಸುತ್ತಾ ಬಂದಿದ್ದೇವೆ. ಆದರೆ ಕೆಲ ಪಟ್ಟಭದ್ರ ಹಿತಾಶಕ್ತಿಗಳು ಮತ್ತು ಕಾಣದ ಕೈಗಳು ಕೆಲವರ್ಷಗಳಿಂದ ನಿರಂತರವಾಗಿ ನಮ್ಮ ಸಂಸ್ಕೃತಿಯ ಮೇಲೆ ದಬ್ಬಾಳಿಕೆ ಮತ್ತು ದಾಳಿಯನ್ನು ನಡೆಸುತ್ತಾ, ನಮ್ಮ ಆಚರಣೆ ಮತ್ತು ಉಡುಪುಗಳನ್ನು ಉದ್ದೇಶ ಪೂರ್ವಕವಾಗಿ ವಿರೂಪಗೊಳಿಸುತ್ತಿರುವ ಹಲವು ಪ್ರಕರಣಗಳು ನಮ್ಮ ಕಣ್ಣಮುಂದೆ ಇವೆ.
ಸರ್ಕಾರಗಳು ಕೊಡವ ಮತ್ತು ಕೊಡವ ಭಾಷಿಕ ಸಮುದಾಯಗಳಿಗೆ ಸಂವಿದಾನ ಬದ್ದವಾಗಿ ದೊರಕಬೇಕಾದ, ಹಕ್ಕು ಮತ್ತು ಭೇಡಿಕೆಗೆ ಇದುವರೆಗೂ ಮನ್ನಣೆ ನೀಡದಿರುವುದು ವಿಪರ್ಯಾಸ. ಈ ಎಲ್ಲಾ ಅಂಶಗಳನ್ನು ಮುಂದಿಟ್ಟುಕೊಂಡು, ನಮ್ಮ ಸಂವಿಧಾನಿಕ ಹಕ್ಕು ಮತ್ತು ಸಂಸ್ಕೃತಿಯ ಭದ್ರತೆಗಾಗಿ, ಮತ್ತು ಜನಾಂಗೀಯ ಅಸ್ಥಿತ್ವವನ್ನು ಕಾಪಾಡುವ ನಿಟ್ಟಿನಲ್ಲಿ, ಎಲ್ಲಾ ಕೊಡವ ಸಮಾಜ, ಸಂಘಟನೆಗಳು, ಭಾಷಿಕ ಸಮುದಾಯಗಳ ಸಂಘಟನೆಗಳು ಸೇರಿದಂತೆ ಎಲ್ಲಾ ಕೊಡವ ಆಭೀಮಾನಿಗಳು ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ಕುಟ್ಟದಿಂದ ಮಡಿಕೇರಿಗೆ ಬೃಹತ್ ಪಾದಯಾತ್ರೆ ನಡೆಸುವ ಮೂಲಕ ನಮ್ಮ ಹಕ್ಕು ಪ್ರತಿಪಾದನೆ ಮಾಡುವ ಕುರಿತಂತೆ ತೀರ್ಮಾನಿಸಿದ್ದೇವೆ.
ಈ ನಿಟ್ಟಿನಲ್ಲಿ ಇದೇ ಫೆ. 02 ನೇ ತಾರೀಖು ಭಾನುವಾರದಂದು ಕುಟ್ಟದಲ್ಲಿ ಈ ಪಾದಯಾತ್ರೆ ಪ್ರಾರಂಭವಾಗಲಿದ್ದು, ಅಂದು ಬೆಳಿಗ್ಗೆ, ಎಲ್ಲಾ ದೇಶತಕ್ಕರು, ಕೊಡವ ಸಮಾಜ, ಭಾಷಿಕ ಸಮುದಾಯಗಳ ಸಮಾಜದ ಮುಖ್ಯಸ್ಥರ ಸಮ್ಮುಖದಲ್ಲಿ ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಪಾದಯಾತ್ರೆಗೆ ಚಾಲನೆನೀಡಲಾಗುವುದು. ಕುಟ್ಟ, ಹುದಿಕೇರಿ, ಪೊನ್ನಂಪೇಟೆ, ಗೋಣಿಕೊಪ್ಪ, ವಿರಾಜಪೇಟೆ, ಮೂರ್ನಾಡು ಮೂಲಕ ಆರು ದಿನಗಳ ಕಾಲ ನಡೆಯುವ ಈ ಬೃಹತ್ ಪಾದಯಾತ್ರೆಯು, ಅಂತಿಮ ಏಳನೇ ದಿನದಂದು ಮೇಕೇರಿಯಿಂದ ಮಡಿಕೇರಿಯ ಜ .ತಿಮ್ಮಯ್ಯ ವೃತ್ತ ತಲುಪಲಿದ್ದು, ಉಳಿದಂತೆ
ಕ್ರಮವಾಗಿ ಗಾಳಿಬೀಡು ಮಾರ್ಗವಾಗಿ ಒಂದು, ತಾಳತ್ಮನೆ ಮಾರ್ಗವಾಗಿ ಎರಡು ತಂಡಗಳು ಜ.ತಿಮ್ಮಯ್ಯ ವೃತ್ತ ತಲುಪಲಿದೆ. ಮತ್ತೊಂದು ಕಡೆಯಿಂದ ಕುಶಾಲನಗರ ಶುಂಟಿಕೊಪ್ಪ, ಸಂಪಿಗೆಕಟ್ಟೆ ಮಾರ್ಗವಾಗಿ ಒಂದು ತಂಡ, ಹಾಗು ಮಕ್ಕಂದೂರು ಸಂಪಿಗೆ ಕಟ್ಟೆ ಮಾರ್ಗವಾಗಿ ಒಂದು ತಂಡ ಸಿದ್ದಾಪುರ ಚೆಟ್ಟಳ್ಳಿ ಮಾರ್ಗವಾಗಿ ಮತ್ತೊಂದು ತಂಡಗಳು ಬಂದು ಫಿ.ಮಾ.ಕಾರ್ಯಪ್ಪ ವೃತ್ತವನ್ನು ತಲುಪಿ. ಫಿ.ಮಾ. ಕಾರ್ಯಪ್ಪ ಅವರ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮೂಲಕ ತೆರಳಿ ಜ. ತಿಮ್ಮಯ್ಯ ಬಳಿಯ ಯಾತ್ರೆಯನ್ನು ಸೇರಿಲಿದೆ.
ಜನರಲ್ ತಿಮ್ಮಯ್ಯ ವೃತ್ತದಲ್ಲಿ ಸಮಾಗಮವಾಗುವ ಎಲ್ಲಾ ತಂಡಗಳು ಒಟ್ಟಾಗಿ ಸೇರಿ ಮಡಿಕೇರಿಯ ಮಂಗೇರಿರ ಮುತ್ತಣ್ಣ ವೃತ್ತ, ಅಜ್ಜಮಾಡ ದೇವಯ್ಯ ವೃತ್ತ, ಕೊಹಿನೂರ್ ರಸ್ತೆ, ಎಸ್.ಬಿ.ಐ. ಚೌಕಿ, ಜೂನಿಯರ್ ಕಾಲೇಜು ರಸ್ತೆ ಮೂಲಕ ಸಾಗಿ, ಮಡಿಕೇರಿ ಜ.ತಿಮ್ಮಯ್ಯ ಕ್ರೀಡಾಂಗಣದ ಬಳಿ ಇರುವ ಕೊಡವ ಸಮಾಜ ಮಂದ್'ನಲ್ಲಿ ಸಮಾವೇಶಗೊಳ್ಳಲಿದೆ ಸಾಗುವ ಮಾರ್ಗದಲ್ಲಿ ನಮ್ಮ ಎಲ್ಲಾ ಮಹಾನ್ ನಾಯಕರುಗಳ ಪುತ್ತಳಿಗಳಿಗೆ ಮಾಲಾರ್ಪಣೆ ಮಾಡಿ ಗೌರವರ ಸಮರ್ಪಿಸಲಾಗುತ್ತದೆ.
ಮಂದ್ನಲ್ಲಿ ನಿಂತು, ಸರ್ಕಾರದ ಪ್ರತಿನಿಧಿಗೆ ನಮ್ಮ ಬೇಡಿಕೆಯನ್ನು ಸಲ್ಲಿಸಿ, ಸಂವಿಧಾನ ಬದ್ದವಾಗಿರುವ ನಮ್ಮ ಹಕ್ಕನ್ನು ಪ್ರತಿಪಾದಿಸುವ ಮೂಲಕ, ನಮ್ಮ ಬೇಡಿಗಳ ಈಡೇರಿಕೆಗೆ ಒತ್ತಾಯಿಸುವ ಮನವಿ ಪತ್ರವನ್ನು ಸಲ್ಲಿಸಲಾಗುತ್ತದೆ.
ಇಡೀ ಯಾತ್ರೆಗೆ ಈಗಾಗಲೇ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಅನುಮತಿ ನೀಡಿದ್ದು, ನಮ್ಮ ಯಾತ್ರೆಯು ಸಂಪೂರ್ಣ ಶಾಂತಿಯುತವಾಗಿ ಹಾಗು ಸಂವಿಧಾನ ಬದ್ದವಾಗಿ ನಡೆಯಲಿದೆ.
ಪಾದಯಾತ್ರೆಯನ್ನು ಅತ್ಯಂತ ಶಿಸ್ತುಬದ್ದವಾಗಿ , ಅಚ್ಚುಕಟ್ಟಾಗಿನಡೆಸುವ ನಿಟ್ಟಿನಲ್ಲಿಳ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಯಾವುದೇ ಯಾವುದೇ ಘೋಷಣೆಗಳಿಲ್ಲದೆ ಭಾಷಣಗಳನ್ನು ಮಾಡದೆ, ಸಮುದಾಯಗಳ ಭಾವನೆಗಳಿಗೆ ಆಗಿರುವ ವೇದನೆಗಳಿಗೆ ಒತ್ತುಕೊಟ್ಟು ಶಾಂತಿಯುತವಾಗಿ ನಡಸಲು ತೀರ್ಮಾನ ಮಾಡಲಾಗಿದೆ. ಮಾರ್ಗದುದ್ದಕ್ಕೂ ಶುಚಿತ್ವಕ್ಕೆ ಒತ್ತು ನೀಡಿದ್ದು, ಆಹಾರ, ನೀರು, ಪಾನೀಯಗಳ ವ್ಯವಸ್ತೆಗಳಿಗಾಗಿ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆ. ಯೋಜನೆಯಂತೆ, ಅತ್ಯಂತ ಶಿಸ್ತು ಮತ್ತು ಸಂಯಮದಿಂದ ನಮ್ಮ ಬೇಡಿಕೆಗಳ ಲಿಖಿತ ಮನವಿಯನ್ನು ಸರ್ಕಾರಕ್ಕೆ ನೀಡುವುದರ ಮೂಲಕ ನಮ್ಮ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಲಾಗುವುದು.
ಕೊಡವ ಮತ್ತು ಭಾಷಿಕ ಸಮುದಾಯಗಳ ಸಂಸ್ಕೃತಿ, ಭದ್ರತೆ, ಸಂವಿಧಾನಬದ್ದ ಹಕ್ಕಿಗಾಗಿ ಎಲ್ಲೆಲ್ಲೂ ವ್ಯಾಪಕ ಆಗ್ರಹ ಕೇಳಿಬರುತಿದ್ದು, ಜನ ಈ ಪಾದಯಾತ್ರೆಯಲ್ಲಿ, ತಂಡೋಪತಂಡಗಳಾಗಿಅತೀ ಹೆಚ್ಚಿನ ಸಂಖ್ಯೆಯಲ್ಲಿ ಬರುವ ನಿರೀಕ್ಷೆಯಿದೆ.. ಇದಕ್ಕೆ ಪೂರಕ ಎಂಬಂತೆ ಪ್ರತೀ ನಾಡ್, ಊರ್, ಒಕ್ಕಗಳಲ್ಲಿ ಸ್ವಯಂಪ್ರೇರಿತ ತಯಾರಿಯಲ್ಲಿ ಜನರೇ ತೊಡಗಿದ್ದು, ನಮ್ಮ ಹಕ್ಕಿಗಾಗಿ ಹೋರಾಡಲು ಸದಾ ಸಿದ್ದ ಎಂಬ ಸಂದೇಶವನ್ನು ಸಾರುತ್ತಿರುವುರದು ವಿಶೇಷವೆನಿಸಿದೆ.
ಈ ಹೋರಾಟಕ್ಕೆ ಎಲ್ಲಾ ಜನಪ್ರತಿಗಳನ್ನೂ ಆಹ್ವಾನಿಸುತಿದ್ದು, ಸರ್ವರೂ ನಮ್ಮ ನ್ಯಾಯಸಮ್ಮತ ಹಕ್ಕು ಮತ್ತು ಬೇಡಿಕೆಗಾಗಿ ನಮ್ಮೊಂದಿಗೆ ಕೈಜೋಡಿಸಬೇಕೆಂದು ಕೋರುತ್ತೇವೆ.
ವಂದನೆಗಳೊಂದಿಗೆ.
ಗೋಷ್ಟಿಯಲ್ಲಿ ಉಪಸ್ತಿತರಿದ್ದವರು ಹೆಸರು ಮತ್ತು ಹುದ್ದೆ:
1. ಶ್ರೀ ಪರದಂಡ ಸುಬ್ರಮಣಿ ಕಾವೇರಪ್ಪ (ಅಧ್ಯಕ್ಷರು)
2. ಶ್ರೀ ಕೀತಿಯಂಡ ವಿಜಯ ಕುಮಾರ್ (ಗೌ ಕಾರ್ಯದರ್ಶಿ)
Latest Articles
- ಕೊಡವ ಜನಾಂಗ ಮತ್ತು ಕೊಡವ ಭಾಷಿಕ 21 ಸಮುದಾಯಗಳು ಸೇರಿದಂತೆ ಸಂಸ್ಕೃತಿಯ ಸಮಗ್ರ ಅಸ್ತಿತ್ವದ ಮೇಲೆ ನಡೆಯುತ್ತಿರುವ ಜನಾಂಗೀಯ ತಾರತಮ್ಯ, ದಬ್ಬಾಳಿಕೆ ಹಾಗು ಸಂವಿಧಾನಾತ್ಮಕ ಹಕ್ಕು ಗಳನ್ನು ಕಸಿಯುವ ಹಾಗು ತಡೆಯುವ ಯತ್ನದ ಕುರಿತಂತೆ…. ಪತ್ರದ ಮೂಲಕ ಪ್ರಧಾನ ಮಂತ್ರಿಗಳಿಗೆ ಮತ್ತು ಮುಖ್ಯ ಮಂತ್ರಿಗಳಿಗೆ ಮನವಿ
- ಕೊಡವ ಮತ್ತು ಭಾಷಿಕ ಸಮುದಾಯಗಳ ಸಂಸೃತಿಯ ಭದ್ರತೆಗಾಗಿ ಮತ್ತು ಸಂವಿಧಾನಬದ್ದವಾಗಿ ಹಕ್ಕು ಮತ್ತು ಸೌಲಭ್ಯಗಳ ಭೇಡಿಕೆಯನ್ನು ಮುಂದಿಟ್ಟು ಕುಟ್ಟದಿಂದ ಮಡಿಕೇರಿಗೆ ನಡೆಯುವ ಪಾದಯಾತ್ರೆಯ ಕುರಿತು…
- ಕೊಡವ ಜನಾಂಗದ ಮತ್ತು ಕೊಡವ ಭಾಷಿಕ ಜನಾಂಗದ ಭಾವನೆಗಳಿಗೆ ಧಕ್ಕೆ ತಂದಿರುವ ಕಟ್ಟೆಮಾಡು ಶ್ರೀ ಮಾದೇಶ್ವರ (ಮಹಾ ಮೃತ್ಯುಂಜಯ) ದೇವಾಲಯದ ಪ್ರಕರಣ
- ಕಟ್ಟೆಮಾಡು ಶ್ರೀ ಮಾದೇವ (ಮಹಾ ಮೃತ್ಯುಂಜಯ ಮಾದೇಶ್ವರ) ದೇವಸ್ಥಾನ- ಕೊಡವ ಸಾಂಪ್ರದಾಯಿಕ ಉಡುಗೆಯಲ್ಲಿ ಪ್ರವೇಶಕ್ಕೆ ಅನಗತ್ಯ ಅಡಚಣೆಯ ಬಗ್ಗೆ ಜಿಲ್ಲಾಡಳಿತಕ್ಕೆ ವಿಚಾರ ಮಂಡನೆ.
- 2024 ಡಿಸೆಂಬರ್ 15 ರಂದು ಹುಣ್ಣಿಮೆಯಾದರೂ “ಪುತ್ತರಿ”ಆಗದು ಯಾಕೆ?